ಸವಿ ಸವಿ ನೆನಪು

ಹರಿಹರನ್
ಕೆ. ಕಲ್ಯಾಣ್
ಭಾರದ್ವಜ್

ಸವಿ ಸವಿ ನೆನಪು ಸಾವಿರ ನೆನಪು

ಸಾವಿರ ಕಾಲಕು ಸವೆಯದ ನೆನಪು || ಪ ||

ಎದೆಯಾಳದಲಿ ಬಚ್ಚಿಕೋಡಿರುವ

ಅಚ್ಚಳಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು|| ಅ.ಪ. ||

ಏನೊ ಒಂದು ತೊರೆದ ಹಾಗೆ

ಯಾವುದೊ ಒಂದು ಪಡೆದ ಹಾಗೆ

ಅಮ್ಮನು ಮಡಿಲ ಅಪ್ಪಿದಹಾಗೆ

ಕಣ್ಣಂಚಲ್ಲೀ ಕಣ್ಣೀರ ನೆನಪು || 1 ||

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಮೊದಮೊದಲ್ ಹಿಡಿದ ಬಣ್ಣದ ಚಿಟ್ಟೆ

ಮೊದಮೊದಲ್ ಕದ್ದ ಜಾತ್ರೆಯ ವಾಚು

ಮೊದಮೊದಲ್ ಸೇದಿದ ಗಣೇಶ ಬೀಡಿ|| ೨ ||

ಮೊದಮೊದಲ್ ಕೂಡಿಟ್ಟ ಹುಂಡಿಯ ಕಾಸು

ಮೊದಮೊದಲ್ ಕಂಡ ಟೂರಿನ್ ಸಿನಿಮಾ

ಮೊದಮೊದಲ್ ಗೆದ್ದ ಕಬಡ್ಡಿ ಆಟ|| ೩ ||

ಮೊದಮೊದಲ್ ಇದ್ದ ಹಳ್ಳಿಯ ಗರಿಮನೆ

ಮೊದಮೊದಲ್ ತಿಂದ ಕೈ ತುತ್ತೂಟ

ಮೊದಮೊದಲ್ ಆಡಿದ ಚುಕುಬುಕು ಪಯಣ

ಮೊದಮೊದಲ್ ಅಲಿಸಿದ ಗೆಳೆಯನ ಮರಣ|| ೪ ||

>

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಮೊದಮೊದಲ್ ಕಲಿತ ಅರೆ ಬರೆ ಈಜು,

ಮೊದಮೊದಲ್ ಕೊಂಡ ಹೀರೊ ಸೈಕಲ್

ಮೊದಮೊದಲ್ ಕಲಿಸಿದ ಕಮಲಾ ಟೀಚರ್|| ೫ ||

ಮೊದಮೊದಲ್ ತಿಂದ ಅಪ್ಪನ ಏಟು

ಮೊದಮೊದಲ್ ಆದ ಮೊಣಕೈ ಗಾಯ

ಮೊದಮೊದಲ್ ತೆಗೆಸಿದ ಕಲರ್ ಕಲರ್ ಪೋಟೊ

ಮೊದಮೊದಲಾಗಿ ಚಿಗುರಿದ ಮೀಸೆ

ಮೊದಮೊದಲಾಗಿ ಮೆಚ್ಚಿದ ಹೃದಯ

ಮೊದಮೊದಲ್ ಬರೆದ ಪ್ರೇಮದ ಪತ್ರ

ಮೊದಮೊದಲಾಗಿ ಪಡೆದ ಮುತ್ತು ಮುತ್ತು ಮುತ್ತು|| ೬ ||

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

2025 ಕನ್ನಡನುಡಿ.ಕಾಂ